ಯಾತ್ರಾ ಪ್ರಾರ್ಥನೆ

Atri Soonu Avatar
ಯಾತ್ರಾ ಪ್ರಾರ್ಥನೆ

ಶ್ರೀಹರಿವಾಯುಗುರುಭ್ಯೋ ನಮಃ

ಯಾತ್ರೆಯೊಂದನ್ನು ಮಾಡುವುದು ಸುಲಭದ ಮಾತಲ್ಲ. ಇದಕ್ಕೆ ಶ್ರೀಹರಿವಾಯುಗುರುಗಳ ಸಂಪೂರ್ಣ ಕೃಪೆ ಬೇಕು. ಅಂತಹ ಒಂದು ಕೃಪೆಯಿಂದ ನಾವು ನೀವೆಲ್ಲರೂ ದುರ್ಗಮವಾದ ಯಾತ್ರೆಗಳನ್ನು ಮಾಡುತ್ತೇವೆ. ಹೀಗೆ ಯಾವುದೇ ಯಾತ್ರೆಯನ್ನು ಪ್ರಾರಂಭಿಸುವ ಮುನ್ನ ನಮ್ಮ ಕುಲದೇವರಲ್ಲಿ ಈ ಕೆಳಕಂಡಂತೆ ಒಂದು ಪ್ರಾರ್ಥನೆಯನ್ನು ಮಾಡೋಣ.

ಬೇಕಾಗುವ ಸಾಮಾಗ್ರಿಗಳು

  1. ಎರಡು ತೆಂಗಿನ ಕಾಯಿ (ಸಿಪ್ಪೆ ಸುಲಿಯದೆ ಇರುವುದು ಉತ್ತಮ)
  2. ಒಂದೆರಡು ವಿಧದ ಹಣ್ಣುಗಳು
  3. ಅರಿಷಿಣ ಕುಂಕುಮ
  4. ಹೂವು
  5. ಮಂತ್ರಾಕ್ಷತೆ
  6. ಒಂದು ಘಂಟೆ
  7. ಎರಡು ದೀಪಗಳು
  8. ಒಂದು ಹಿತ್ತಾಳೆಯ ಹರಿವಾಣ

ಮೊದಲು ದೇವರ ಮುಂದೆ ದೀಪಗಳನ್ನು ಹೊತ್ತಿಸಿ ಇಡಬೇಕು. ನಂತರ ಗೃಹಸ್ಥನು ಈ ಎರಡೂ ಕಾಯಿಗಳು, ಹಣ್ಣುಗಳು ಹಾಗೂ ಅರಿಷಿನ ಕುಂಕುಮವನ್ನು ಹರಿವಾಣದಲ್ಲಿ ಇಟ್ಟುಕೊಂಡು, ಗೃಹಿಣಿಯು ಕೈಯಲ್ಲಿ ಅರಿಷಿನ ಕುಂಕುಮವನ್ನು ಹಿಡಿದುಕೊಂಡು ದೇವರ ಮುಂದೆ ನಿಲ್ಲಬೇಕು.

ಈ ಯಾತ್ರೆಯನ್ನು ಮಾಡಲು ನಮ್ಮ ಮನಸ್ಸಿನಲ್ಲಿ ಪ್ರೇರಣೆ ಮಾಡಿದ, ಶ್ರೀರಾಘವೇಂದ್ರಗುರುಗಳ, ತತ್ತ್ವಾಭಿಮಾನಿದೇವತೆಗಳ ಅಂತರ್ಯಾಮಿ ಶ್ರೀಮುಖ್ಯ್ರಪ್ರಾಣನ ಒಳಗೆ ನೆಲೆಸಿರುವ ಶ್ರೀಹರಿಯನ್ನು ನಮಿಸಿ, ಈ ಯಾತ್ರೆಯು ಸುಗಮವಾಗಿ, ಶಾಸ್ತ್ರವು ಹೇಳಿರುವ ಪ್ರಕಾರದಲ್ಲಿ, ನಿಷಿದ್ಧ ಪದಾರ್ಥಗಳನ್ನು, ನಿಷಿದ್ಧ ವಸ್ತುಗಳನ್ನು ದರ್ಶಿಸದೆ, ಸ್ಪರ್ಷಿಸದೆ, ಭುಂಜಿಸದೆ ಶುದ್ಧವಾದ ರೀತಿಯಲ್ಲಿ ನಡೆಯಲಿ. ಯಾವುದೇ ವಿಪತ್ತುಗಳು ಬಾರದಂತೆ ನಮ್ಮನ್ನು ದೇವತೆಗಳು ರಕ್ಷಿಸಲಿ, ಪಿತೃಕಾರ್ಯತರ್ಪಣದಿಗಳು ಸಾಂಗವಾಗಿ ನೆರವೇರಲಿ ಎಂದು ಪ್ರಾರ್ಥಿಸಬೇಕು.

ಪ್ರಯಾಣೇ ಗರುಡಾರೂಢಂ ಪಾರಿಜಾತಹರಂ ಹರಿಮ್ |
ಸತ್ಯಯಾ ಸಹಿತಂ ಧ್ಯಾಯೇತ್ ಸರ್ವಕಾರ್ಯಾರ್ಥ ಸಿದ್ಧಯೇ ||

ಅಗ್ರತೋ ನಾರಸಿಂಹಶ್ಚ ಪೃಷ್ಠತೋ ಗೋಪಿನಂದನಃ|
ಉಭಯೋಃ ಪಾರ್ಶ್ವಯೋಃ ಅಸ್ತಾಂ ಸಶರೌ ರಾಮಲಕ್ಷ್ಮಣೌ ||

ನಂತರ ಅಗಸ್ತ್ಯ ಮಹಾಮುನಿಗಳನ್ನು ವಿಶೇಷವಾಗಿ ಸ್ಮರಿಸುತ್ತಾ ಈ ಕೆಳಕಂಡ ಮಂತ್ರದಿಂದ ಅವರಲ್ಲಿ ಪ್ರಾರ್ಥನೆಯನ್ನು ಮಾಡಬೇಕು. ಅಗಸ್ತ್ಯರು ನಾವು ಹೊರಡುತ್ತಿರುವ ಯಾತ್ರೆಯ ಸ್ಥಳಕ್ಕೆ ನಮಗಿಂತಲೂ ಮೊದಲೇ ಹೋಗಿ, ಅಲ್ಲಿ ನಮಗಾಗಿ ಅನುಕೂಲಗಳನ್ನು ಕಲ್ಪಿಸಿಕೊಡುತ್ತಾರೆ. ಇದನ್ನು ಈ ಕೆಳಗಿನ ಶ್ಲೋಕದ ಮೂಲಕ ಪ್ರಾರ್ಥಿಸಬೇಕು.

ಗಚ್ಛ ಗೌತಮ ಶೀಘ್ರ ತ್ವಂ ಗ್ರಾಮೇಷು ನಗರೇಷು ಚ |
ಆಸನಂ ಭೋಜನಂ ಶಯ್ಯಾಂ ಕಲ್ಪಯಸ್ವ ಮಮಾಗ್ರತಃ ||

ನಂತರ ಆ ಫಲವಸ್ತುಗಳನ್ನು ಶ್ರೀದೇವರ ಮುಂದೆ ಚಿಕ್ಕ ರಂಗವಲ್ಲಿಯನ್ನು ಹಾಕಿ, ಅದರ ಮೇಲೆ ಒಂದು ಮಣೆಯನ್ನಿ ಇರಿಸಿ ಅದರ ಮೇಲೆ ಇಡಬೇಕು.ಗಂಟೆಯನ್ನು ನಿಧಾನವಾಗಿ ಬಾರಿಸುತ್ತಾ, ಫಲವಸ್ತುವಿನ ಮೇಲೂ, ಶ್ರೀದೇವರ ಮೇಲೂ ಮಂತ್ರಾಕ್ಷತೆಯನ್ನು ಸಮರ್ಪಿಸಬೇಕು. ಕಾಣಿಕೆಯನ್ನು ಕೂಡ ಇಡಬಹುದು. ಮನೆಯಲ್ಲಿ ಹಿರಿಯರಿದ್ದರೆ ಅವರಿಗೂ ನಮಸ್ಕರಿಸಬೇಕು.

ಆ ಎರಡೂ ತೆಂಗಿನ ಕಾಯಿಗಳನ್ನು ಹಾಗೆಯೇ ಇರಿಸಿ, ಯಾತ್ರಾ ನಂತರ ಪ್ರಸಾದವಾಗಿ ಸ್ವೀಕರಿಸಬಹುದು. ಹಣ್ಣು ಹೂವುಗಳನ್ನು ಯಾತ್ರೆಗೆ ಹೊರಡುವ ಸಂದರ್ಭದಲ್ಲಿ ತೆಗೆದುಕೊಂಡು ಸ್ವೀಕರಿಸಬಹುದು. ನಂತರ ಎಲ್ಲರೂ ನಗು ನಗುತ್ತಾ ಯಾತ್ರಾರ್ಥಿಗಳನ್ನು ಬೀಳ್ಕೊಡಬೇಕು.

ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ತಿಳಿದುಕೊಳ್ಳಲು ನಮ್ಮ ವಾಟ್ಸ್ಯಾಪ್ ಗ್ರುಪಿನ ಸದಸ್ಯರಾಗಬಹುದು

https://chat.whatsapp.com/DKoSOO5dqu82rRHSiiEcau

Leave a Reply

Your email address will not be published. Required fields are marked *

Search

Latest Posts

Categories

error: Content is protected !!